ಗುರು ವಂದನೆ ಹಾಗು ಪ್ರತಿಭಾ ಪುರಸ್ಕಾರ​ ೨೦೧೯

ಡಿಸ್ಕಶನ್ ಕ್ಲಾಸ್ ಅಸೋಸಿಯೇಷನ್ (ರಿ) ಸಂಘದಿಂದ 21 ನೇ ತಾರೀಕು ಜೂಲೈ ತಿಂಗಳಿನಲ್ಲಿ ಎಲ್ಲಾ ಡಿ. ಸಿ ವಿದ್ಯಾರ್ಥಿಗಳು ಸೇರಿಕೊಂಡು ತಮ್ಮ ನೆಚ್ಚಿನ ಗುರುಗಳಾದ ದಿ|| ಗೋಪಾಲಕೃಷ್ಣ ಮೂರ್ತಿ ರವರ ನೆನಪಿನಲ್ಲಿ ತಮಗೆ ವಿಧ್ಯೆಯನ್ನು ಕಲಿಸಿದ ಎಲ್ಲಾ ಗುರುಗಳಿಗೆ ನಮನ ಸಲ್ಲಿಸಿ ಈ ವರ್ಷ ನಡೆದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಹಾಗು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಕೊಡಲಾಗುವುದು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಶ್ರೀ ತಿಪ್ಪೇಸ್ವಾಮಿ ರವರು, ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಗಮಿಸಲಿದ್ದಾರೆ.

ಗುರು ವಂದನೆ ಹಾಗು ಪ್ರತಿಭಾ ಪುರಸ್ಕಾರ​ ೨೦೧೯

 

ಡಾ|| ಹರಿ ಕೃಷ್ಣ ಮಾರಮ್ ಉಪಕುಲಪತಿ, ಯೂನಿವರ್ಸಲ್ ಡಿಜಿಟಲ್ ಯೂನಿವರ್ಸಿಟಿ, ಗ್ರಾಂಡ್ ಮಾಸ್ಟರ್ ಡಾ|| ಪ್ರವೀಣ್ ರಂಕ, ಬಿಬಿಎಂಪಿ ಕಾರ್ಪೊರೇಟರ್, ಪುಟ್ಟೇನಹಳ್ಳಿ ಶ್ರೀಮತಿ ಪ್ರಭಾವತಿ ರಮೇಶ್ ಹಾಗು ಶ್ರೀ. ರಮೇಶ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಗುರು ವಂದನೆ ಹಾಗು ಪ್ರತಿಭಾ ಪುರಸ್ಕಾರ​ ೨೦೧೯

ಶಿಕ್ಷಣ, ಪರಿಸರ ಹಾಗು ಆರೋಗ್ಯ ಕ್ಷೇತ್ರ ದಲ್ಲಿ ಸೇವೆ ಸಲ್ಲಿಸಿರುವ ಯುವ ಪ್ರತಿಭಾನ್ವಿತರಿಗೆ ಸನ್ಮಾನ ಮಾಡಲಾಗುವುದು ಎಂದು ಡಿ.ಸಿ ಸಂಘದ ಸಂಸ್ಥಾಕರು ಹಾಗು ಕಾರ್ಯದರ್ಶಿಯವರಾದ ಧನಂಜಯ ಪದ್ಮನಾಭಾಚಾರ್ ರವರು ಪ್ರಕಟಿಸಿದ್ದಾರೆ.

 

ಸ್ಥಳ: ಉದಯಭಾನು ಕಲಾಸಂಘ, ರಾಮಕೃಷ್ಣ ಆಶ್ರಮ ಲೇಔಟ್, ಕೆಂಪೇಗೌಡ ನಗರ, ಗವಿಪುರಂ, ಬೆಂಗಳೂರು-೧೯
ಸಮಯ: ಬೆಳಿಗ್ಗೆ 10 ಗಂಟೆಗೆ

Leave a Reply

Your email address will not be published. Required fields are marked *

This site is protected by reCAPTCHA and the Google Privacy Policy and Terms of Service apply.